Friday, 1 February 2013

ಮನಸೆಲ್ಲ ನಿನ್ನ ನೆನಪು

ಮನಸೆಲ್ಲ ನಿನ್ನ ನೆನಪೆ
ಕನಸೆಲ್ಲ ನಿನ್ನ ನೆನಪೆ
ಉಸಿರಲ್ಲೂ ನಿನ್ನ ಹೆಸರೆ
ಬದುಕಲ್ಲು ನಾನು ಬರೆದೆ ||

ಬಯಲಾಗೆ ನೀನು ಬಂದರೆ ಏನು
ಮನಸೆಲ್ಲ ಹುರುಪು ಹುರುಪು
ಮರುಳಾಗಿ ನಾನು ನೋಡುತಲಿರುವೆ
ಆ ನಿನ್ನ ಕಣ್ಣ ಹೊಳಪು||

ಪ್ರಿತಿಯ ಹಕ್ಕಿ ಹಿಡಿದಾಗ ನೀನು
ಹೋಯಿತು ಹಾರಿಹಾರಿ
ಮೀನುಗುವ ತಾರೆ ನಿನಗಾಗಿ ತಂದೆ
ಹಿಡಿಯಲೆ ಪೊರಿ ಪೊರಿ||

ಆ ಇರುಳಿನಲ್ಲಿ ಬೆಳದಿಂಗಳಲ್ಲಿ
ಬೆರೆತಾಗ ನಾನು ನೀನು
ಆ ಮೊಡದಲ್ಲಿ ಮರೆಯಾದನು
ಚಂದಮಾಮ ನಾಚಿ ನಾಚಿ||


                             ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ
 

2 comments: