Tuesday, 3 January 2023

ಗೊಂಬೆ ಅಲ್ಲವೊ ಬಾಬಾ ಸಾಹೇಬ

ನಮಗೊಂದೆ ಮಾರ್ಗ
ಒಟ್ಟಾಗಿ ಸಾಗೋಣll
ಬಾಬಾ ಸಾಹೇಬರ ಮಾತು
ಮರಿಬೇಡ ಹುಚ್ಚ ಮನುಜ
ಗೊಂಬೆ ಅಲ್ಲವೋ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು

ಅಂಬೇವಾಡಿಲಿ
ಅಂಬೆಗಾಲಿಟ್ಟ ಕಂದನೋ
ಅವಮಾನ ಎದುರಿಸಿ
ಬೋಧಿಯಾದನೋll
ಜ್ಞಾನ ಸಂಪಾದಿಸಿ
ಅಜ್ಞಾನ ಒಡೆದೊಡಿಸಿll
ದೇಶವೇ ದಾಟಿ ಹೋಗಿ
ಜಾತಿಯೇ ಮೀರಿ ಬಂದ

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...


ಒಂದೇ ತಾಯಿಯ
ಮಕ್ಕಳು ನಾವೆಲ್ಲ
ಭೇದ ಭಾವವು
ನಮಗೆ ಬೇಕಿಲ್ಲll
ನಾವು ಬಹು ಜನರೆಲ್ಲ
ಒಟ್ಟಾಗಿ ಬಾಳೊಣಂತll
ಮನುವಾದ ಸಿದ್ದಾಂತವ
ಹರಿದು ಸಂವಿಧಾನ ಬರೆದ

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...

ಅಸ್ಪೃಶ್ಯ ಎಂದರು
ಊರ ಹೊರಗೆ ಇಟ್ಟರು
ಮುಕ್ಕೊಟಿ ದೇವರು
ನಿನಗೆ ಕಾಣರುll
ಬುದ್ದನ್ನೆ ನಂಬೋಣ
ನವ ಭಾರತ ನಿರ್ಮಾಣ ಮಾಡೋಣll
ಅವರೆ ನಮ್ಮ ದಿಕ್ಸೂಚಿ
ಸೆರೋಣ ಅವರ ಮಾರ್ಗದಿ ನಡೆದು

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...


           #ಭೀಮರಾಯ ಬಡಿಗೇರ್, ಮಾಲಗತ್ತಿ  

Wednesday, 5 March 2014

ತಮ್ಮ, ಬ್ಯಾರೆ ಮನಿಗೊಂಟಾನ

          ಸೂರ್ಯನ ಕಿರಣಗಳಿಗೆ ಭೂಮಿತಾಯಿಯ ಮಡಿಲಿಗೆ ಜಾರಬೇಕೆನ್ನುವ ತವಕ, ಮೋಡಗಳಿಗೆ ಭೂಮಿತಾಯಿಗೆ ಇನ್ನು ನೆರಳಾಗಿರಬೇಕೆನ್ನುವ ತವಕ, ಮೋಡದಲ್ಲಿ ಅವಿತಿರುವ ಹನಿಗಳಿಗೆ ಭೂಮಿತಾಯಿಯನ್ನು ತಂಪಾಗಿಸಬೇಕೆನ್ನುವ ತವಕ ಆದರೆ ನನಗೆ, ಕೊಳೆಯಾಗಿರುವ ಬಟ್ಟೆಗಳನ್ನು ತೊಳೆಯಬೇನ್ನುವ ತವಕ. ಈ ತವಕದಲ್ಲಿ ನನ್ನೆಲ್ಲ ಬಟ್ಟೆಗಳನ್ನು ನೆನೆಸಿ ಬಂಡೆಯ ಮೇಲೆ ಹಾಕಿ ತಿಕ್ಕುತ್ತಿರುವಾಗ ಸುಮಾರು 20 ವರ್ಷಗಳ ಹಿಂದೆ ನಮ್ಮನ್ನೆಲ್ಲ ದೂರಮಾಡಿ ಬೇರೆ ಮನೆ ಮಾಡಿದ ನನ್ನ ತಮ್ಮ ನನ್ನ ಮುಂದೆ ಬಂದು ಕುಳಿತಿದ್ದ.
     ಹೌದು, ನನಗೆ ಸುಮಾರು 5-6 ವರ್ಷಗಳಿರಬೇಕು ನನ್ನ ಕುಟುಂಬದ ಸಂಭ್ರಮಕ್ಕೆ ಪಾರ(ಅಂತ್ಯ)ವೆ ಇರಲಿಲ್ಲ. ಯಾಕೆಂದರೆ, ಆ ನಮ್ಮ ಚಿಕ್ಕ ಕುಟುಂಬಕ್ಕ ತಮ್ಮನ ಆಗಮನವಾಗಿತ್ತು ಆಗ ಅಣ್ಣ, ಅಕ್ಕ ತಮ್ಮನನ್ನು ಕೈಯಲ್ಲಿ ಎತ್ತಿಕೊಂಡು ಮುದ್ದಾಡಿ ಸಂಭ್ರಮಿಸಿದ್ದರೆ ನಾನು ಮತ್ತು ತಂಗಿ ಅವ್ವನ ಮಡಿಲಲ್ಲಿ ಮಲಗಿದ್ದ ತಮ್ಮನ ಹಾಲುಗಲ್ಲಕ್ಕೆ ಮೆತ್ತಗೆ ಮುತ್ತು ಕೊಟ್ಟು ಖುಷಿ ಪಟ್ಟಿದ್ದೇವು.
ಆಗ ನನ್ನ ಮತ್ತು ಅಕ್ಕನ ಸಂಭ್ರಮ ಹೇಳತಿರದು. ತಮ್ಮನ ತೊಟ್ಟಿಲ ಸುತ್ತ ಗಾಣದ ಎತ್ತಿನ ಹಾಗೆ ಗಿರಕಿ ಹೊಡೆಯುವುದೇ ನಮ್ಮ ಮುಖ್ಯ ಕೆಲಸ. ತಮ್ಮನನ್ನು ಮಲಗಲು ಕೂಡಾ ಬಿಡುತ್ತಿರಲಿಲ್ಲ. ತಮ್ಮನಿಗೆ ಜಳಕ(ಸ್ನಾನ) ಮಾಡಿಸುವುದನ್ನು ನೋಡುವುದೇ ನಮಗೆ ವಿಶೇಷ  ಬೆಳಕು ಹರಿದು ಬಿಸಿಲು ಬಿದ್ದರೆ ಸಾಕು ಅಕ್ಕ, ನಾನು ತಾ ಮುಂದು ನಾ ಮುಂದು ಎಂದು ಓಡಿ ಓಡಿ ಹೋಗಿ ದೊಡ್ಡಮ್ಮನನ್ನು ಕರೆದುಕೊಂಡು ಬರುತಿದ್ದೇವು, ದೊಡ್ಡಮ್ಮ ತಮ್ಮನ ಮೈಗೆ ಎಣ್ಣೆ ಅಚ್ಚಿ ತಿಕ್ಕುವಾಗ(ಮಸಾಜ್ ಮಾಡುವಾಗ) ತಮ್ಮ ಯರ್ರ್ ಯರ್ರ್ ಎಂದು ಅಳುತ್ತಿದ್ದರೆ ನಾನು 'ಬ್ಯಾನಿ ಆಗುತ್ತದೆ ಸಾಕು ಬಿಡು' ಎಂದು ದೊಡ್ಡಮ್ಮನ ಕೈ ಬಿಡಿಸುತಿದ್ದೆ, ಆದರೂ, ನನ್ನ ಮಾತು ಕೇಳದೆ ದೊಡ್ಡಮ್ಮ ತನ್ನ ಕೆಲಸ ತಮ್ಮನ ಜಳಕ(ಸ್ನಾನ) ಮುಗಿಯುವವರೆಗೂ ಮುಂದುವರೆಸುತಿದ್ದಳು. ಕೆಲವೋಮ್ಮೆ ತಮ್ಮ ಅಳುವುದನ್ನು ನೋಡಿ ನಾನು ಅಳುತಿದ್ದೆ. ತಮ್ಮನ ಜಳಕ(ಸ್ನಾನ) ಮುಗಿದ ನಂತರ ತೊಟ್ಟಿಲಲ್ಲಿ ಮಲಗಿಸುತಿದ್ದರು ನಾನು ಲಾಲಿ ಜೊ ಲಾಲಿ ಹಾಡಿ ತಮ್ಮನನ್ನು ಮಲಗಿಸುತಿದ್ದೆ.
    ನೋಡು ನೋಡುತ್ತಲೇ ತಮ್ಮ ನಮ್ಮನ್ನು ನೋಡಿ ನಗುವುದು, ಆಟ ಆಡುವುದು ಸುರುಮಾಡಿದ. ಆಗ ಅಪ್ಪ ತಮ್ಮನಿಗೆ ಆಟವಾಡಲು ಹಲವು ರೀತಿಯ ಆಟದ ಸಾಮಾನುಗಳನ್ನು ತಂದು ಕೊಟ್ಟದ್ದರು. ನಾನು ಅವುಗಳನ್ನು ಹಿಡಿದು ಆಡವಾಡಿಸುತಿದ್ದೆ, ಕೆಲವೋಮ್ಮೆ ನನ್ನ ಕೈಯಲ್ಲಿ ಇರುವ ಸಾಮಾನುಗಳನ್ನು ಕಿತ್ತುಕೊಂಡು ಆಟವಾಡುತಿದ್ದ. ಹಗಲು ಹೊತ್ತಿನಲ್ಲಿ ತಮ್ಮನನ್ನು ಮಲಗಲು ಬಿಡುತ್ತಿರಲಿಲ್ಲ, ಮಲಗಿದ್ದರೆ ಎಬ್ಬಿಸಿ ಆಟವಾಡುತಿದ್ದೆ ಆಗ ತಮ್ಮ ಅಳಲು ಸುರು ಮಾಡಿದರೆ ಅವ್ವನಿಂದ ಏಟು ತಪ್ಪುತ್ತರಲಿಲ್ಲ ಆದರೂ ನಮ್ಮನ ಜೋತೆ ಆಟವಾಡುವುದನ್ನು ಬಿಡಿತ್ತಿರಲಿಲ್ಲ.
   ಒಂದು ದಿನ ಅವ್ವ ಎಲ್ಲ ಕೆಲಸಗಳನ್ನು ಮುಗಿಸಿ ಬಟ್ಟೆ ತೊಳೆಯಲು ಹಳ್ಳಕ್ಕೆ ಹೊಗಿದ್ದಳು. ಮನೆಯಲ್ಲಿ ತಮ್ಮನ ಜೋತೆ ಆಟವಾಡುತ್ತ ಒಬ್ಬನೆ ಇದ್ದೆ, ಇದ್ದಕಿಕದ್ದ ಹಾಗೆ ತಮ್ಮ ಅಳುವುದಕ್ಕೆ ಸುರು ಮಾಡಿದ. ನಾನು ತೊಟ್ಟಿಲು ತೂಗಿದರು, ಜೋಲಾಲಿ ಹಾಡಿದರು, ಬಣ್ಣದ ಗೆಜ್ಜೆನಾದ ಮಾಡಿದರು ಸುಮ್ಮನಾಗಲಿಲ್ಲ ಆಗ ತಮ್ಮನ ಜೋತೆ ನಾನು ಅಳಲು ಸುರುಮಾಡಿದೆ. ಸ್ವಲ್ಪ ಹೊತ್ತಿನ ನಂತರ ಬಂದ ಅವ್ವ ನಾವಿಬ್ಬರು ಅಳುವುದನ್ನು ಕೇಳಿ ಮನೆಯೊಳಗೆ ಓಡಿ ಬಂದು 'ಏನಾಯ್ತು' ಎಂದು ನನ್ನನ್ನು ಕೇಳುತ್ತ ತೊಟ್ಟಿಲಲ್ಲಿ ಅಳುತಿದ್ದ ತಮ್ಮನನ್ನು ಮಡಿಲಲ್ಲಿ ಹಾಕಿಕೊಂಡು ಹಾಲು ಕುಡಿಸುತ್ತ 'ನಿನಗೇನಾಯ್ತು ನೀ ಯಾಕ್ ಅಳಲಾಕತ್ತಿ' ಎಂದು ತೊಡೆಮೇಲೆ ನನ್ನನ್ನು ಮಲಗಿಸಿ ಕಣ್ಣೀರು ಒರೆಸುತಿದ್ದರೆ, ನಾನು ಮಾತ್ರ ಏನು ಹೇಳದೆ ಸುಮ್ಮನೆ ಅಳುತಿದ್ದೆ. ಅವ್ವ ಎಷ್ಟು ಸಮಾದಾನ ಮಾಡಿದರು ಸುಮ್ಮನಾಗಲಿಲ್ಲ ಆಗ ಅಪ್ಪ ಕೆಲಸ ಮಾಡುವ ಸ್ಥಳಕ್ಕೆ ಕಳಿಸಿದಳು. ಅಪ್ಪನ ಹತ್ತಿರ ಹೊದರು ದುಃಖ ಕಡಿಮೆ ಆಗಲಿಲ್ಲ. ಅಪ್ಪ ಕೆಲಸ ಮಾಡುವ ಸ್ಥಳದಲ್ಲಿದ್ದ ಜನರು ನನ್ನನ್ನು ಸಮದಾನ ಮಾಡಲು ವಿವಿಧ ರೀತಿಯ ತಿನಿಸು ತಂದು ಕೊಟ್ಟರು ಅಳುವುದು ನಿಲ್ಲಿಸಲಿಲ್ಲ ಮತ್ತೆ ಅವ್ವನ ಹತ್ತಿರ ಕಳಿಸಿದರು. ನಾನು ಅಳುತ್ತಲೆ ಹೋದೆ ಅಷ್ಟರಲ್ಲಿ ತಮ್ಮ ಅಳುವುದನ್ನು ನಿಲ್ಲಿಸಿ ಆಟ ಸುರುಮಾಡಿದ್ದ. ನಾನು ಇನ್ನು ಅಳುವುದನ್ನು ನೋಡಿ ಅವ್ವ 'ಇನ್ನು ಗಪ್ಪಾಗಿಲ್ಲ(ಅಳುವುದನ್ನು ನಿಲ್ಲಿಸಿಲ್ಲಾ)? ತಮ್ಮನನ್ನು ನೋಡು ಹುಚ್ಚ ಅಣ್ಣ ಹೇಗೆ ಅಳುತಿದ್ದಾನೆ ಎಂದು ನಿನ್ನನ್ನು ನೋಡಿ ನಗುತಿದ್ದಾನೆ' ಎಂದಳು. ಅದಕ್ಕೆ ಪುಷ್ಠಿ ಕೊಡುವಂತೆ ತಮ್ಮ ನನ್ನ ನೋಡಿ ನಗುತಿದ್ದ ಆಗ ನಾನು ಅವ್ವ ಮತ್ತು ತಮ್ಮನಿಗೆ ಮೆಲ್ಲಗೆ ಹೊಡೆದಿದ್ದೆ ಮತ್ತೆ ಸಂಜೆಯವರೆಗೆ ತಮ್ಮನ ಜೋತೆ ಆಟವಾಡಿದ್ದೆ.
   ದಿನಾಲು ನನ್ನ ಜೋತೆ ಆಟವಾಡುತಿದ್ದ ತಮ್ಮ  ನನ್ನ ಜೋತೆ ಆಟವಾಡುವುದನ್ನು ನಿಲ್ಲಿಸಿದ್ದ ಯಾವಾಗಲು ಮಲಗಿರುತಿದ್ದ ಅವ್ವನನ್ನ ಕೇಳಿದರೆ 'ತಮ್ಮನಿಗೆ ಅರಾಮಿಲ್ಲ ನಾಳೆ ಅರಾಮ ಆದ ಮೇಲೆ ಆಟ ಆಡುವಂತೆ' ಎಂದು ಹೇಳಿದಳು ನಾನು ಸುಮ್ಮನೆ ತೊಟ್ಟಿಲು ಮುಂದೆ ಕುಳಿತು ತೊಟ್ಟಿಲು ತೂಗುವುದು, ಮೆಲ್ಲಗೆ ತಮ್ಮನನ್ನು ಇಣುಕಿ ನೋಡುವುದು, ಮೃದುವಾಗಿ ಮುಟ್ಟುವುದು ಮಾಡುತಿದ್ದೆ. ಮುಟ್ಟಿದಾಗ ತಮ್ಮ ನಗದಿರುವುದಕ್ಕೆ ನಿರಾಶೆಯಾಗುತಿತ್ತು.
  ಒಂದು ದಿನ ನಾನು ಎದ್ದು ತೊಟ್ಟಿಲು ನೋಡಿದೆ ಅಲ್ಲಿ ತಮ್ಮ ಇರಲಿಲ್ಲ. ಅಕ್ಕನನ್ನು ಕೆಳಿದೆ ಆಗ ಅಕ್ಕ 'ತಮ್ಮನನ್ನು ಅವ್ವ ಅಪ್ಪ ದವಾಖಾನಿಗೆ ಕರಕೊಂಡು ಹೊಗ್ಯಾರ ಇನ್ನು ಸ್ವಲ್ಪ ಹೊತ್ತು ಬಿಟ್ಟು ಬರುತ್ತಾರ' ಅಂತ ಹೇಳಿದ್ದಳು. ಅವ್ವ ಅಪ್ಪ ಬರುವ ದಾರಿ ಕಾಯುತ್ತ ಬಾಗಿಲಲ್ಲಿ ಕಿಳಿತಿದ್ದೆ ಯಾವುದಾದರು ಬಸ್ ಬರುವ ಶಬ್ದ ಕೇಳಿದರೆ ರೋಡಿಗೆ ಓಡಿ ಹೋಗುತ್ತಿದ್ದೆ ಆದರೆ ರಾತ್ರಿ ಆದರು ಅವ್ವ ಅಪ್ಪ ಬರಲಿಲ್ಲ. ಅವ್ವ ಅಪ್ಪ ಬಂದ ಮೇಲೆ ಎಬ್ಬಿಸುತ್ತೇನೆ ಎಂದು ಅಕ್ಕ ನನಗೆ ಊಟ ಮಾಡಿ ಮಲಗಿಸಿದಳು. ಮುಂಜಾನೆ ಎದ್ದಾಗ ಅವ್ವ ಅಪ್ಪ ಬಂದಿದ್ದರು ತಮ್ಮ ಅವ್ವ ಮಡಿಲಲ್ಲಿ ಮಲಗಿದ್ದ ಅವ್ವ ಅಕ್ಕ ಅಳುತಿದ್ದರು ನಾನು ಎಲ್ಲ ಆಟದ ಸಾಮಾನುಗಳನ್ನು ತೆಗೆದುಕೊಂಡು ತಮ್ಮನ ಹತ್ತಿರ ಹೋಗಿ ತಮ್ಮನ ಕೈಗೆ ಕೊಟ್ಟೆ ಇಷ್ಟು ದಿನ ನನ್ನ ಕೈಯಲ್ಲಿರುವ ಆಟದ ಸಾಮಾನುಗಳನ್ನು ಕಿತುಕೊಂಡು ಆಡುತಿದ್ದ ತಮ್ಮ ಒಂದು ಆಟದ ಸಾಮಾನು ತನ್ನ ಕೈಗೆ ತೆಗೆದುಕೊಳ್ಳದೆ ಸುಮ್ಮನೆ ಮಲಗಿದ್ದ 'ಅವ್ವ ತಮ್ಮನಿಗೆ ಎಬ್ಬಿಸು ಯಾಕ ಮಲಗ್ಯಾನ ನಾನು ಆಟ ಆಡಬೇಕು' ಎಂದು ಕೇಳಿದರೆ ನನ್ನನ್ನು ತಬ್ಬಿಕೊಂಡು 'ಇಲ್ಲ ಕಂದ ಇನ್ಮ್ಯಾಲ ತಮ್ಮ ಏಳೊಲ್ಲ. ನಗೊಲ್ಲ, ಆಟ ಆಡೊಲ್ಲ ನಮ್ಮೆಲ್ಲರ ಮ್ಯಾಲ ಸಿಟ್ಟ ಮಾಡಿಕೊಂಡಾನ ನಮ್ಮನ್ನೆಲ್ಲ ಬಿಟ್ಟು ಬ್ಯಾರೆ ಮನಿಗಿ ಹೊಂಟಾನ' ಎಂದು ಜೋರಾಗಿ ಅಳುತಿದ್ದಳು. ಸ್ವಲ್ಪ ಹೊತ್ತಿನ ನಂತರ ನಮ್ಮ ಓಣಿಯ ಕೆಲವು ಜನ ಬಂದು ಅವ್ವನ ಮಡಿಲಲ್ಲಿ ಮಲಗಿದ್ದ ತಮ್ಮನನ್ನು ಎತ್ತಿಕೊಂಡು ಹೋದರು.
    ಅವತ್ತು ತಮ್ಮನನ್ನು ಎತ್ತಿಕೊಂಡು ಹೋದವರು ವಾಪಾಸ್ ಬಂದರು ಆದರೆ ತಮ್ಮ ಬರಲಿಲ್ಲ. ಅವ್ವನಿಗೆ ಕೇಳಿದರೆ 'ತಮ್ಮ ನಮ್ಮೆಲ್ಲರ ಮ್ಯಾಲ ಸಿಟ್ಟ ಮಾಡಿಕೊಂಡು ನಮ್ಮನ್ನೆಲ್ಲ ಬಿಟ್ಟು ಬ್ಯಾರೆ ಮನಿಗಿ ಹೊಗ್ಯಾನ ಮತ್ತೆ ಬರಲ್ಲ' ಎಂದು ಹೇಳಿದಳು. 'ತಮ್ಮನ ಹತ್ತಿರ ನಾನು ಹೋಗುತ್ತೇನೆ ಮನಿ ತೊರಿಸು' ಎಂದರೆ ನನ್ನನ್ನು ತೆಕ್ಕೆ ಹಿಡಿದುಕೊಂಡು ಅಳುತಿದ್ದಳು. ಊರು ತುಂಬಾ ಹುಡುಕಿದರು ತಮ್ಮನ ಮನಿ ಸಿಗಲಿಲ್ಲ.
    ತಮ್ಮ ಮನಿ ಬಿಟ್ಟು ಹೋಗಿ 2-3 ದಿನಗಳಾಗಿದ್ದವು ಮನೆಯಲ್ಲಿ ಅದೆ ಖಾಲಿ ತೊಟ್ಟಿಲು ತಮ್ಮನ ಅಳುವು ಇಲ್ಲ, ನಗುವು ಇಲ್ಲ. ಜೋಗುಳ ಹಾಡು ಇಲ್ಲ ತಮ್ಮ ಬಿಟ್ಟು ಹೋಗಿರುವ ಆಟದ ಸಾಮಾನುಗಳನ್ನು ಹಿಡಿದುಕೊಂಡು ಖಾಲಿ ತೊಟ್ಟಿಲ ಮುಂದೆ ಸುಮ್ಮನೆ  ಕುಡುತಿದ್ದೆ. ನಾನು ಹಾಗೆ ಕುಡುವುದನ್ನು ನೋಡಿ ಅಪ್ಪ ತೊಟ್ಟಿಲು ಬಿಚ್ಚಿ ಬೇರೆಕಡೆ ಇಟ್ಟುಬಿಟ್ಟ ಅದು ಕೂಡಾ ಇಲ್ಲದಾಯಿತು.
      ಅಂದು ಮನೆ ಬಿಟ್ಟು ಹೋಗಿದ್ದ ತಮ್ಮ ಇವತ್ತು ನನ್ನ ಮುಂದೆ ಅದೆ ನಗುಮೊಗದೊಂದಿಗೆ ನನ್ನ ಎದುರಿಗೆ  ಕುಳಿತಿದ್ದ  ನನಗೆ ಸಂತೋಷ, ದುಃಖ ಎರಡು ಒಟ್ಟಿಗೆ ನನ್ನ ಆವರಿಸಿತ್ತು. ಅದೇ ಸಂತೋಷದಲ್ಲಿ ಮತ್ತೆ ತೊಟ್ಟಿಲು ಕಟ್ಟಬೇಕು, ಅದರಲ್ಲಿ ತಮ್ಮನನ್ನು ಮಲಗಿಸಿ ತೊಟ್ಟಿಲು ತೂಗಿ ಜೋಲಾಲಿ ಹಾಡಬೇಕು ಅದೇ ತಾನು ಬಿಟ್ಟು ಹೋಗಿರುವ ಆಟದ ಸಾಮಾನುಗಳನ್ನು ಕೊಟ್ಟು ಆಟ ಆಡಿಸಬೇಕು, ತಮ್ಮ ಬಂದಿದ್ದಾನೆ ಎಂದು ಅವ್ವ, ಅಪ್ಪ, ಅಕ್ಕ ಅಣ್ಣ, ತಂಗಿಗೆ ಹೇಳಬೇಕು ಅನ್ನುವಷ್ಟರಲ್ಲಿ ತಮ್ಮ ಮತ್ತೆ ಅದೃಶ್ಯನಾಗಿದ್ದ.

Saturday, 2 February 2013

ಅರೆರೆರೆ... ಹಾರಿತ ಲಂಗ

ಗ.  ಅರೆರೆರೆ... ಹಾರಿತ ಲಂಗ
      ಲಂಗ ನೋಡಿ ಹಿಡಿತಲ್ಲ ಗುಂಗ
      ನನ್ನ ನೋಡಿ ಮಾರಿ ತಿರುವಬ್ಯಾಡ ಅಂಗ..
      ರಸ್ತೆ ಮೇಲೆ ನಡಿದು ಬಂದರೆ ನವಿಲ ಕುಣದಂಗ
      ವಾರಿ ನೋಟ ಬಿರಿ ನಾರಿ ಮಾಡ್ತಿ ಹೆಂಗೆಂಗ
      ರಾತ್ರಿ ಮಲಗಿದಾಗ ಕನಸಲಿ ನೀನೆ ಬಂದಂಗ||
      ನೀನೆ ಬಂದ ಘಳಿಗಿ ಕೈಯಾಗ ಸ್ವರ್ಗ ಸಿಕ್ಕಂಗ... 

ಹೆ.  ಅರೆರೆರೆ...ಆಗಬ್ಯಾಡ ನೀ ಮಂಗ
      ಬಾಯಿತೆರೆದ ನಿಂತ್ಯಾಕ ಅಂಗ
      ನನ್ನ ನೋಡಿ ಆಡಬ್ಯಾಡ ಹುಚ್ಚರಂಗ..   
      ಲಂಗ ನೋಡಿ ನಿಂತಿ ಯಾಕ ಕರೆಂಟ ಹೊಡ್ದಂಗ
      ನನ್ನ ಇಷ್ಟದ ಲಂಗ ಹಾಕ್ತಿನಿ ಹಾಡ್ತಿ ಯಾಕಿಂಗ?
      ಸುಮ್ನ ನನ್ನ ಕಾಡಬ್ಯಾಡ ಹೋಗ ಹುಚ್ಮಂಗ||
      ಮಂಗ್ಯಾನಂಗ ಮಾಡ್ತಿಯಲ್ಲ ಬುದ್ದಿಲ್ಲ ನಿಂಗ?...
                                                                ಅರೆರೆರೆ...   

ಗ.  ಮಾರಿ ನೋಡ್ಲಾಕಂತ ಬರ್ತಿ ತಾಸ್ಗೊಮ್ಮಿ ನೀರಿಗಿ
     ಬಂದಾಗೊಮ್ಮಿ ಬಡ್ಕಂಡ್ಬರ್ತಿ ಪೌಡರ್ ಮಾರಿಗಿ
     ಮನಸಿನ ಮಾರು ಹೇಳ್ತಿನಿ ಬಾರ ಗ್ವಾಡಿ ಮರಿಗಿ||
     ನಿನ್ನ ಮ್ಯಾಲ ಇಟ್ಟಿನಿ ಮನ್ಸ ಹೇಳ್ಬ್ಯಾಡ್ಯಾರಿಗಿ...
                                                                 ಅರೆರೆರೆ...

ಹೆ.  ನನ್ನ ಸಲ್ವಾಗಿ ಸಾಯಬ್ಯಾಡ ಸರಿಯೋ ಸೈಡಿಗಿ
      ಒಂದೆ ಮಾತು ಹೇಳಿದರೆ ನನ್ನ ಅಣ್ಣರಿಗಿ
      ಕೈಕಾಲು ಕಡ್ದ ಹೋಗಿಯತಾರ ನಿನ್ನ ಮೋರಿಗಿ||
      ನನ್ನ ಚಿಂತ್ಯಾಗ ಮಣ್ಣಾಗ್ತಿಯ ಕಡೆತನಕ ಕೊರಗಿ...
                                                                   ಅರೆರೆರೆ...

ಗ.  ಕಂಡಿನಿ ಬಾರ ಕಟ್ವಾಳ್ಪೊರಿ ನನ್ನ ಎದುರಿಗಿ
      ಸಾವಿರೂಪಾಯಿ ಕೊಟ್ತಂದಿನಿ ಮುಂಗಾರ್ಮಳೆ ಸಿರಿಗಿ
      ಹುಟ್ಕೊಂಡ್ಬಾರ ಹುಡ್ಗಿ ನೀನು ನಮ್ಮುರ್ತೆರಿಗಿ||
      ಇಬ್ಬರು ಕೂಡಿ ಮಾಡೋಣಂತ ಜಾತ್ರಿ ಜೋರಾಗಿ...
                                                                     ಅರೆರೆರೆ...

ಹೆ.  ಇಷ್ಟೊತ್ತಿನ್ಯಾಗ ಹೇಳೊ ಮಾತಲ್ಲ ನಿಂತ ದಾರಿಗಿ
       ನಿನ್ನ ಮಾತು ಕೇಳಿ ಮನಸ ಹೊತಲ್ಲ ಕರಗಿ
       ಚಂದಾಗಿವಿ ಹುಡುಗಾ ನಾನು ನೀನು ವಾರಿಗಿ||
       ಕಾಯಿ ಹೊಡ್ದ ಕೈ ಮುಗಿಯೋಣ ಕೂಡಿ ದೇವರಿಗಿ...
                                                                       ಅರೆರೆರೆ...

                                                            ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ
   
     

ವಾರಿಗಣ್ಣಿಲೆ ನನ್ನ ಮಾರಿ ನೋಡಿದೆಲ್ಲ?

ಗ.  ವಾರಿಗಣ್ಣಿಲೆ ನನ್ನ ಮಾರಿ ನೋಡಿದೆಲ್ಲ?
     ಮುಗಳ ನಗೆಯ ಬಿರಿದೆಲ್ಲ
     ನಿನ್ನ ಮನಸಿನ್ಯಾಗ ಬ್ಯಾರೆ ಆದಲ್ಲ
     ಏನ? ಐತಿ ಹೇಳ ನೀ ಮದಲ?

ಹೆ.  ಹೆ ಹುಡ್ಗ ಎಷ್ಟ ಬೆನ್ನ ಬಿದ್ದಿಯಲ್ಲ
      ನೀ ಎಲ್ಲಿ ಇಟ್ಟಿದಿ ಖ್ಯಾಲ
      ನನ್ನ ಮನಸಿನ್ಯಾಗ  ನೀ ಇಲ್ಲ
      ಹಿಂದ್ಹಿಂದ ಬಂದರ ಮುರಿತಿನಿ ಹಲ್ಲ

ಗ.  ಬಾಗ್ಲ್ಯಾಗ್ ನಿಂತ ಬಾಗಿಬಾಗಿ ಹುಡುಗಿ
     ಬಾ ಬಾ ಅಂದೆಲ್ಲ?
     ಕಿಡಿಕ್ಯಾಗ್ ಬಂದು ಕಣ್ ಕಣ್ ಹೋಡೆದು
     ಕಿಲಕಿಲ ನಕ್ಕೆಲ್ಲ?
     ನೀರಿಗಿ ಬಂದಾಗ ಮಾರಿ ನೋಡಿ
     ಮೂಗ್ ಮುರದೆಲ್ಲ?
     ಸಾವಕಾಸ ಸೈಡಿಗಿ ಬಂದು
     ಸೌರಿ ವಾದೆಲ್ಲ?

ಹೆ.  ಹಾದ್ಯಾಗ್ ಬಿದ್ಯಾಗ್ ಬಂದು ನೀನು
      ಐ ಲವ್ ಅಂತೇಲ್ಲ?
     ಹಗಲು ರಾತ್ರಿ ಬಾಳ ನನಗ
     ಕಿರಿಕಿರಿ ಕೊಡ್ತೆಲ್ಲ?
     ಏನರ ಏನರ ಟೈಪ್ ಮಾಡಿ
     ಮೆಸೆಜ್ ಮಾಡ್ತೆಲ್ಲ?
     ಮಿಸ್ಸಾಗ್ ಬ್ಯಾಡಂತ ನನ್ನ
     ಮನಸ್ಸು ಕೆಡ್ಸ್ತೆಲ್ಲ?

ಗ.  ಹರೆಯದ ಹುಡುಗಿ ನಿನ್ಮ್ಯಾಲೈತಿ
     ಬಾಳ್ ನನ್ಕ್ಯಾಲ
     ಕಾಡಿಸಿ ಕಾಡಿಸಿ ಕಡಿಗಿ ಕೊಟ್ರೆ
     ಗ್ರಿನ್ ಸಿಗ್ನಲ್ಲ
     ಕೊಡ್ತಿನಿ ಗಿಪ್ಟ್ ಹಿಡ್ಕೊ ನೀನು
     ತಾಜ್ ಮೆಹಲ್ಲ
     ಬಿಡಿಸಿ ಬಿಡಿಸಿ ಹೇಳ್ತಿನಿ ನಿನಗ
     ಪ್ರೀತಿಯ ಮಕ್ ಮಲ್ಲ್

ಹೆ.  ಪ್ರೀತಿಯ ಅರ್ಥ ತಿಳಿಯದಂತ
      ಹುಡುಗಿ ನಾನಲ್ಲ
      ಕೊಟ್ಟಿನಿ ಮನಸ ಕಟ್ಟೊ ತಾಳಿ
      ಟೈಮ್ ನನಗಿಲ್ಲ
      ಯಾರರ ಬರಲಿ ಯಾರರ ಬಿಡಲಿ
      ಆಗೋನು ಶಾಮೀಲ
      ಕತ್ತಲಾಯ್ತು ನಡಿಯೋ ಹುಡುಗ
      ಹಾಕೊಣ ಬಾಗಿಲ

                                     ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ
     

ನಿನ್ನ ಮಾರಿ ನೋಡಿ ಬಾಳ ದಿನ ಆತ

ಗ.  ನಿನ್ನ ಮಾರಿ ನೋಡಿ ಬಾಳ ದಿನ ಆತ
     ನೀ ಉಳಿಸಿಲ್ಲೇನ ನನದೊಂದು ಗುರುತ
     ಗೆಳತಿ ಹೋಂಟೇನ? ನೀ ನನ್ನ ಮರೆತ
     ಇರಲೇಂಗ? ನಾ ಇನ್ನ ಜಿವಂತ..

ಹೆ. ನಿನ್ನ ಪ್ರೀತಿ ಮಾಡಿ ಬಾಳ ಮರುಗುದಾತ
     ನಾ ಉಳಿಸಿಲ್ಲ ನಿನಗ ಕೊಟ್ಟ ಮಾತ
     ಅಗಲಿಸಿ ಕುಂತಾರ ನಮಗ ಬೇಕಂತ
     ನೀನಗ ಮಾರಿ ತೊರ್ಸಲಿ ನಾ ಏನಂತ..?

ಗ. ದಿಕ್ಕಿಲ್ಲದವ ಅಂತ ಆಗಿದ್ದಿ ಜೊಡಿ
    ದಿಕ್ಕ ನೀ ತಪ್ಪಿಸಿ ವಾದೇನ? ದೂಡಿ
    ಹಗಲಿರುಳು ಎನ್ನದೆ ನೀ ನನ್ನ ಕೂಡಿ
    ಎಲ್ಲಿ ವಾದಿ ಗೆಳತಿ? ನನ್ನ ಮರೆಮಾಡಿ
                     ಬಾಳ ದಿನದಿಂದ ಕಾಡಿದೆಲ್ಲ ಬೆಡಿ
                     ಪ್ರತಿ ಘಳಿಗಿ ನೀ ಇರತಿದ್ದಿ ಕೂಡಿ
                     ಯಾರು ಏನು ಹೇಳ್ಯಾರ ನಿನಗ ಚಾಡಿ
                     ಒಂದು ಸಾರಿ ಬಂದ್ಹೋಗ ಮಾತಾಡಿ..

ಹೆ.  ನಿನ್ನ ಚಿಂತ್ಯಾಗ ಕುಂತೇನ ಮುದಡಿ
       ಸತ್ತ ಹೋಗ್ಯಾವ ನನ್ನ ನರನಾಡಿ
      ಕೈಕಾಲು ಬರವಲ್ದು ಬರಲಾಕ ಓಡಿ
      ನಿನ್ನ ನೆನಪಾಗಿ ಅಳತಿನಿ ಬೊರ್ಯಾಡಿ
                     ಗೆಳೆಯ ಗೊತ್ತಾತ ನಮ್ಮ ಪ್ರೀತಿ ರಾಡಿ
                     ನಿನ್ನ ಜಾತಿ ಕೇಳ್ಯಾರೆಲ್ಲ ಕೂಡಿ
                     ಮದವಿ ಮಾಡ್ಯಾರ ಅವಸರ ಮಾಡಿ
                     ಸೆರೊದೊಂದೆ ಬಾಕಿ ನಾ ಸುಡಗಾಡಿ..

ಗ.  ನಿನಗಾಗಿ ಮರುಳ ತಂದಿದ್ದೆ ಹರಳ
      ಮೆಚ್ಚಿ ಕೊಯ್ದೇನಾ? ನೀ ನನ್ನ ಕೊರಳ
      ರಾತ್ರಿ ಬೆಳತಾನ ಎದಿ ಮ್ಯಾಲ ಬೆರಳ
      ತಿದ್ದಿ ತಿಡತಿದ್ದಿ ನೀ ಎಷ್ಟ ಸರಳ
                     ಪ್ರೀತಿಗಿ ಬಂತ್ಹೇನ? ಜಾತಿ ಅಡ್ಡ ಬಾಳ
                     ನನ್ನ ಕೂಡಿದಾಗ ಜಾತಿ ಎಲ್ಲಿತ್ತ್ಹೇಳ?
                     ಏನಾರ ಹೇಳಬ್ಯಾಡ ನೀ ಸುಳ್ಳ ಸುಳ್ಳ
                     ನಿನ್ನ ಚಿಂತ್ಯಾಗ ತಿಂದಿಲ್ಲ ಕೂಳ..

ಹೆ.  ನಿನ್ನ ಜಾತಿ ಕಿಳಂತ ಬಡಿದಾರ ಬಾಳ
      ಕೇಳುವವರು ಇಲ್ಲ ಗೆಳೆಯ ಈ ನನ್ನ ಗೊಳ
      ಹಸಿಗ್ವಾಡಿ ಮ್ಯಾಲ ಇಟ್ಟಂಗ ಅಳ್ಳ
     ಚುಚ್ಚಿ ಮಾತಡತಾರ ಇರಲೆಂಗ ಹೇಳ?
                     ಹಿಡಿದು ಹೋಗುವಾಗ ಬ್ಯಾರೆ ಹುಡ್ಗನ ಬಳ್ಳ
                     ಕಿತ್ತು ಬರತಿತ್ತ ಹೊಟ್ಟ್ಯಾನ ಕಳ್ಳ
                     ನನ್ನ ನಂಬಿ ನೀ ಆಗ ಬ್ಯಾಡ ಹಾಳ
                     ಕೊನಿಗಿ ಆಗಲಿಲ್ಲ ನಾ ನಿನ್ನ ಚರಣ ದೂಳ..

                                                                ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ

ಮನಸಿಲ್ದ ಮದವಿಯ ಮಾಡ್ಯಾರೋ ಗೆಳೆಯ...

ಹೆ.  ಮನಸಿಲ್ದ ಮದವಿಯ ಮಾಡ್ಯಾರೋ ಗೆಳೆಯ
      ಬಿಟ್ಟು ನಿನ್ನ ನಡಬರಕ
      ನೀನಿಲ್ದ ಬದುಕು ನನಗಿಲ್ಲೋ ಒಡೆಯ
      ಆಗು ನನ್ನ ಹಣೆಬರಕ||

ಗ.  ಮಾಯದ ಗಾಯ ಮಾಡ್ಯೊಂಟಿ ಗೆಳತಿ
      ನೀನಿಲ್ದ ಬರೆ ನರಕ
      ಮತ್ಯಾಕ  ಒಳ್ಳಿ ಬಂದಿದಿ ನನ್ನ
      ಹೊಟ್ಟಿಯ ಹುರುಸಾಕ||

ಹೆ.  ಕೈಕಾಲು ಬಿದ್ದರು ಬಿಡಲಿಲ್ಲ ಗೆಳೆಯ
      ನಾ ನಿನ್ನ ನೋಡಲಾಕ
      ಕಂಬಕ್ಕೆ ಕಟ್ಟ್ಯಾಕಿ ಬಡಿದಾರೋ ನನ್ನ
      ಬರವಲ್ದು ನಡಿಲಾಕ
      ಮನಕ ಬಂದಂಗ ಬಡಿವಾಗ ಯಾರು
      ಬಂದಿಲ್ಲ ಬಿಡಸಾಕ||
      ಸೊನ್ನಿ ಮುಚ್ಚಿ ಬಿದ್ದರು ಸಾಯ್ಲೆಂತ ಹೇಳಿ
      ಬರಲಿಲ್ಲ ಎಬಸಾಕ
      ಯಾರಿಗೆ ಹೇಳಲಿ ನನ ದುಃಖ..

ಗ.  ಸುಳ್ಳ ಸುಳ್ಳ ಹೇಳಿದ್ರ ಮಳ್ಳಲ್ಲ ನಾನು
     ನೀನ್ನ ಮಾತು ಕೇಳಲಾಕ
     ಕಥಿಮಾಡಿ ಹೇಳಿದ್ರು ಆಗವಲ್ದ ಗೆಳತಿ
     ನಿನ್ನ ಮಾತು ನಂಬಲಾಕ
     ಹುರುಪಿಲೆ ತೈಯ್ಯಾರ ಆಗಿದಿ ಗಂಡನ
     ಮನಿಗಿ ಹೋಗಲಾಕ||
     ಹೋಗುದುರೊಳಗ ಮುಚ್ಚೋಗು ನೀನು
     ನನ್ನನ್ನು ಮಣ್ಣಾಗ
     ಸುಖಪಡು ಗಂಡನ ಮನಿಯಾಗ..

ಹೆ. ಚುಚ್ಚಿ ಚುಚ್ಚಿ ನನ್ನ ಕೊಲ್ಲತಿ ಯಾಕೋ
     ನೋಡು ನೀ ನನ್ನ ಮೈನಾ
     ಮೈಯಲ್ಲ ಬಾಸುಂಡಿ ಬಂದಾವ ಗೆಳೆಯ
     ಸಿಗಲ್ಲದು ಕೂನಾ
     ನಿನ್ನ ಬಿಟ್ಟು ಹೋಗಲಾರದೆ ಬಂದಿನಿ ನನ್ನ ಕೈಯ
     ಬಿಡಬ್ಯಾಡೋ ನೀನಾ||
     ಇದ್ದರೆ ನಿನ್ನ ಜೋತೆ ಇರತಿನಿ ಗೆಳೆಯ
     ಹೋಗದಿಲ್ಲ ನಾ ಇನ್ನ
     ಇಲ್ಲಂದ್ರ ಸಾಯಿಸಿ ಬಿಡು ನನ್ನ..

ಗ. ಕಟ್ಟಿದ ತಾಳಿಯ ತಗದೊಗಿಯ ಗೆಳತಿ
    ಸಾಯ್ಸಿಲಿ ನೀನಗ್ಯಾಕ
    ಯಾರ್ಯಾರು ಅಡ್ಡ ಬರತಾರ ಬರಲಿ
    ಸಿಳತಿನಿ ನಡಕ
    ಹಸಿರು ಬಳಿಯ ತಂದಿನಿ ಗೆಳತಿ
    ನಾ ನೀನಗ ತೊಡಸಾಕ||
    ನಾನು ನೀನು ಜೋಡ ಆಗುನು
    ಯಾರಿಂದ ಆಗದಿಲ್ಲ  ಬಿಡಸಾಕ
    ಅದರ ಅಂಜೀಕಿ ನೀನಗ್ಯಾಕ...

                                                ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ