Saturday, 2 February 2013

ವಾರಿಗಣ್ಣಿಲೆ ನನ್ನ ಮಾರಿ ನೋಡಿದೆಲ್ಲ?

ಗ.  ವಾರಿಗಣ್ಣಿಲೆ ನನ್ನ ಮಾರಿ ನೋಡಿದೆಲ್ಲ?
     ಮುಗಳ ನಗೆಯ ಬಿರಿದೆಲ್ಲ
     ನಿನ್ನ ಮನಸಿನ್ಯಾಗ ಬ್ಯಾರೆ ಆದಲ್ಲ
     ಏನ? ಐತಿ ಹೇಳ ನೀ ಮದಲ?

ಹೆ.  ಹೆ ಹುಡ್ಗ ಎಷ್ಟ ಬೆನ್ನ ಬಿದ್ದಿಯಲ್ಲ
      ನೀ ಎಲ್ಲಿ ಇಟ್ಟಿದಿ ಖ್ಯಾಲ
      ನನ್ನ ಮನಸಿನ್ಯಾಗ  ನೀ ಇಲ್ಲ
      ಹಿಂದ್ಹಿಂದ ಬಂದರ ಮುರಿತಿನಿ ಹಲ್ಲ

ಗ.  ಬಾಗ್ಲ್ಯಾಗ್ ನಿಂತ ಬಾಗಿಬಾಗಿ ಹುಡುಗಿ
     ಬಾ ಬಾ ಅಂದೆಲ್ಲ?
     ಕಿಡಿಕ್ಯಾಗ್ ಬಂದು ಕಣ್ ಕಣ್ ಹೋಡೆದು
     ಕಿಲಕಿಲ ನಕ್ಕೆಲ್ಲ?
     ನೀರಿಗಿ ಬಂದಾಗ ಮಾರಿ ನೋಡಿ
     ಮೂಗ್ ಮುರದೆಲ್ಲ?
     ಸಾವಕಾಸ ಸೈಡಿಗಿ ಬಂದು
     ಸೌರಿ ವಾದೆಲ್ಲ?

ಹೆ.  ಹಾದ್ಯಾಗ್ ಬಿದ್ಯಾಗ್ ಬಂದು ನೀನು
      ಐ ಲವ್ ಅಂತೇಲ್ಲ?
     ಹಗಲು ರಾತ್ರಿ ಬಾಳ ನನಗ
     ಕಿರಿಕಿರಿ ಕೊಡ್ತೆಲ್ಲ?
     ಏನರ ಏನರ ಟೈಪ್ ಮಾಡಿ
     ಮೆಸೆಜ್ ಮಾಡ್ತೆಲ್ಲ?
     ಮಿಸ್ಸಾಗ್ ಬ್ಯಾಡಂತ ನನ್ನ
     ಮನಸ್ಸು ಕೆಡ್ಸ್ತೆಲ್ಲ?

ಗ.  ಹರೆಯದ ಹುಡುಗಿ ನಿನ್ಮ್ಯಾಲೈತಿ
     ಬಾಳ್ ನನ್ಕ್ಯಾಲ
     ಕಾಡಿಸಿ ಕಾಡಿಸಿ ಕಡಿಗಿ ಕೊಟ್ರೆ
     ಗ್ರಿನ್ ಸಿಗ್ನಲ್ಲ
     ಕೊಡ್ತಿನಿ ಗಿಪ್ಟ್ ಹಿಡ್ಕೊ ನೀನು
     ತಾಜ್ ಮೆಹಲ್ಲ
     ಬಿಡಿಸಿ ಬಿಡಿಸಿ ಹೇಳ್ತಿನಿ ನಿನಗ
     ಪ್ರೀತಿಯ ಮಕ್ ಮಲ್ಲ್

ಹೆ.  ಪ್ರೀತಿಯ ಅರ್ಥ ತಿಳಿಯದಂತ
      ಹುಡುಗಿ ನಾನಲ್ಲ
      ಕೊಟ್ಟಿನಿ ಮನಸ ಕಟ್ಟೊ ತಾಳಿ
      ಟೈಮ್ ನನಗಿಲ್ಲ
      ಯಾರರ ಬರಲಿ ಯಾರರ ಬಿಡಲಿ
      ಆಗೋನು ಶಾಮೀಲ
      ಕತ್ತಲಾಯ್ತು ನಡಿಯೋ ಹುಡುಗ
      ಹಾಕೊಣ ಬಾಗಿಲ

                                     ರಚನೆ : ಭೀಮರಾಯ ಡಿ ಬಡಿಗೇರ್, ಮಾಲಗತ್ತಿ
     

No comments:

Post a Comment